ಅನುಕ್ರೀತಿ ವಾಸ್ (ಜನನ ೨೮ ಸೆಪ್ಟೆಂಬರ್ ೧೯೯೮) ಭಾರತೀಯ ಮಾದರಿ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರರಾಗಿದ್ದು, ಅವರು ಫೆಮಿನಾ ಮಿಸ್ ಇಂಡಿಯಾ ೨೦೧೮ ಕಿರೀಟವನ್ನು ಪಡೆದರು. ೮ ಡಿಸೆಂಬರ್ ೨೦೧೮ ರಂದು ಚೀನಾದ ಸನ್ಯಾದಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯ ೬೮ ನೇ ಆವೃತ್ತಿಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರು ಟಾಪ್ ೩೦ ಸ್ಥಾನವನ್ನು ಗಳಿಸಿದರು. == ವೈಯಕ್ತಿಕ ಜೀವನ == ಅನುಕ್ರೀತಿ ಹುಟ್ಟಿ ಬೆಳೆದದ್ದು ಭಾರತದ ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ. ಅವರನ್ನು ಏಳನೇ ವಯಸ್ಸಿನಲ್ಲಿ ಇವರ ತಂದೆ ಕೈಬಿಟ್ಟರು. ಇವರು ತಿರುಚಿರಾಪಳ್ಳಿಯ ಮಾಂಟ್ಫೋರ್ಟ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಆರ್.ಎಸ್. ಕೃಷ್ಣನ್ ಹೈಯರ್ ಸೆಕೆಂಡರಿ ಶಾಲೆಯಿಂದ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದರು. ಇವರು ಪ್ರಸ್ತುತ ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಫ್ರೆಂಚ್ ಸಾಹಿತ್ಯದಲ್ಲಿ ಬಿಎ ಪದವಿ ಪಡೆಯುತ್ತಿದ್ದಾರೆ. ಇವರಿಗೆ ಪ್ರಸ್ತುತ ಶಾಲೆಯಲ್ಲಿ ಓದುತ್ತಿರುವ ಕಿರಿಯ ಸಹೋದರನೂ ಇದ್ದಾನೆ. ಇವರು ಕ್ರೀಡಾ ವ್ಯಕ್ತಿ ಮತ್ತು ಮೋಟಾರುಬೈಕಿನ ಉತ್ಸಾಹಿಯಾಗಿದ್ದರೆ. == ಪ್ರದರ್ಶನ ಇತಿಹಾಸ == ಔಟ್ ಗೋಯಿಂಗ್ ಶೀರ್ಷಿಕೆದಾರ ಮತ್ತು ಮಿಸ್ ವರ್ಲ್ಡ್ ೨೦೧೭ ಮನುಷಿ ಚಿಲ್ಲರ್ ಅವರು ಅನುಕ್ರೀತಿ ವಾಸ್ ಫೆಮಿನಾ ಮಿಸ್ ಇಂಡಿಯಾ ೨೦೧೮ ಕಿರೀಟವನ್ನು ಪಡೆದರು. ಈ ಹಿಂದೆ ಇವರು ಫೆಬ್ರವರಿ ೨೦೧೮ ರಲ್ಲಿ ಫೆಮಿನಾ ಮಿಸ್ ಇಂಡಿಯಾ ತಮಿಳುನಾಡು ೨೦೧೮ ಕಿರೀಟವನ್ನು ಪಡೆದರು. ಸ್ಪರ್ಧೆಯ ಸಮಯದಲ್ಲಿ, ಇವರು ಮಿಸ್ ಬ್ಯೂಟಿಫುಲ್ ಸ್ಮೈಲ್ ಕಿರೀಟವನ್ನು ಪಡೆದರು ಮತ್ತು ಬ್ಯೂಟಿ ವಿತ್ ಎ ಪರ್ಪಸ್ ಪ್ರಶಸ್ತಿಯನ್ನು ಗೆದ್ದರು. ೮ ಡಿಸೆಂಬರ್ ೨೦೧೮ ರಂದು ಚೀನಾದ ಸನ್ಯಾದಲ್ಲಿ ನಡೆದ ಮಿಸ್ ವರ್ಲ್ಡ್ ೨೦೧೮ ಸ್ಪರ್ಧೆಯಲ್ಲಿ ಅನುಕ್ರೀತಿ ಭಾರತವನ್ನು ಪ್ರತಿನಿಧಿಸಿದ್ದು, ಅಲ್ಲಿ ಅವರು ಟ್ಯಾಲೆಂಟ್ ಸುತ್ತಿನ ಮೊದಲ ೧೮ ಸ್ಥಾನಗಳಲ್ಲಿ ಸ್ಥಾನ ಪಡೆದರು. ತನ್ನ ಸುತ್ತಿನ ಹೆಡ್ ಟು ಹೆಡ್ ಚಾಲೆಂಜ್ ಗೆಲ್ಲುವ ಮೂಲಕ ಅವರು ಸ್ಪರ್ಧೆಯ ಅಗ್ರ ೩೦ ಸ್ಥಾನಗಳನ್ನು ಪ್ರವೇಶಿಸಿದ್ದಾರೆ. ಅವರು ಮಿಸ್ ವರ್ಲ್ಡ್ ೨೦೧೮ ಸ್ಪರ್ಧೆಯ ಟಾಪ್ ೩೦ ರಲ್ಲಿ ಸ್ಥಾನ ಪಡೆದರು. == ಚಿತ್ರಕಥೆ == == ಗ್ಯಾಲರಿ == == ಉಲ್ಲೇಖಗಳು ==